(೧೮೯೬, ಜನವರಿ ೨೦ರಂದು ನ್ಯೂಯಾರ್ಕ್ ನಲ್ಲಿ ನೀಡಿದ ತರಗತಿಯ ಉಪನ್ಯಾಸ – ಜೆ ಜೆ ಗುಡ್ವಿನ್ ಅವರು ಬರೆದುಕೊಂಡಿದ್ದು, ಈಗ ಕನ್ನಡದಲ್ಲಿ ಪ್ರಥಮ ಬಾರಿಗೆ ಪ್ರಕಟವಾಗುತ್ತಿದೆ.)

ಎಲ್ಲ ಪೂಜಾ ಭಾವನೆಗಳೂ ಸರಿಯಾದವು, ಮತ್ತು ಒಳ್ಳೆಯವು ಎಂಬುದು ನಮಗೆ ಗೊತ್ತು. ಭಗವಂತನ ಪೂಜೆಯೇ ಭಕ್ತಿ ಎಂಬುದನ್ನೂ ನಾವು ನೋಡಿದೆವು. ಬೇರೆ ಯಾವ ದೇವತೆಯ ಪೂಜೆಯೂ ಭಕ್ತಿಯಲ್ಲ. ಆದರೆ ಭಗವಂತನನ್ನು ಅನೇಕ ರೂಪಗಳಲ್ಲಿ ಅನೇಕ ಭಾವನೆಗಳ ಮೂಲಕ ಪೂಜಿಸಬಹುದು. ಈ ಎಲ್ಲ ಭಾವನೆಗಳೂ ಸರಿಯಾದವು ಮತ್ತು ಒಳ್ಳೆಯವು. ಆದರೆ ಒಂದು ತೊಂದರೆ ಇದೆ : ಇದನ್ನು ಒಪ್ಪಿಕೊಂಡು ಅನುಸರಿಸಿದ್ದೇ ಆದರೆ ನಮ್ಮ ಶಕ್ತಿಯೆಲ್ಲ ಬೇರೆ ಬೇರೆ ಕಡೆ ಹರಿದು ಹೋಗಿ ಏನನ್ನೂ ಸಾಧಿಸಿದಂತಾಗುವುದಿಲ್ಲ. ಉದಾರ ಮನಸ್ಸಿನವರ ಒಂದು ಪ್ರವೃತಿ ಏನೆಂದರೆ ಎಲ್ಲವನ್ನೂ ಅಭ್ಯಾಸ ಮಾಡಲು ಹೋಗಿ ಯಾವುದರಲ್ಲಿಯೂ ಪರಿಣತಿಯನ್ನು ಪಡೆಯದೆ ಇರುವುದು. ಈ ದೇಶದಲ್ಲಿ (ಅಮೆರಿಕದಲ್ಲಿ) ಅನೇಕ ವೇಳೆ ಇದೊಂದು ಜಾಡ್ಯವಾಗುತ್ತದೆ-ಎಲ್ಲವನ್ನೂ ಕೇಳುವುದು, ಯಾವುದನ್ನೂ ಮಾಡುವುದಿಲ್ಲ.

ನಮ್ಮ ಪುರಾತನ ಭಕ್ತನ ಬೋಧನೆ ಹೀಗಿದೆ : ‘ಎಲ್ಲ ಹೂವುಗಳಿಂದಲೂ ಮಕರಂದವನ್ನು ಹೀರಿ, ಎಲ್ಲರೊಡನೆಯೂ ಗೌರವದಿಂದ ಬೆರೆಯಿರಿ, ಎಲ್ಲರಿಗೂ ‘ಹೌದು, ಹೌದು’ ಎನ್ನಿ. ಆದರೆ ನಿಮ್ಮ ನೆಲೆಯಿಂದ ಮಾತ್ರ ಕದಲಬೇಡಿ.” ಈ ರೀತಿ ನಿಮ್ಮ ನೆಲೆಯನ್ನು ಬಿಡದಿರುವುದೇ ನಿಷ್ಠೆ. ಇತರರ ಆದರ್ಶಗಳನ್ನು ದ್ವೇಷಿಸ ಬೇಕಾಗಿಲ್ಲ, ನಿಂದಿಸಬೇಕಾಗಿಲ್ಲ. ಎಲ್ಲವೂ ಯಥಾರ್ಥವಾದವುಗಳೇ. ಆದರೆ ಅದೇ ಸಂದರ್ಭದಲ್ಲಿ, ನಮ್ಮ ಆದರ್ಶವನ್ನು ಗಟ್ಟಿಯಾಗಿ ಹಿಡಿದುಕೊಂಡಿರಬೇಕು.

ರಾಮಭಕ್ತ ಹನುಮಂತನ ಒಂದು ಕಥೆಯಿದೆ. ಅವನ ಜೀವನಾವಧಿಯಲ್ಲಿಯೇ ರಾಮನು ಮತ್ತೆ ಕೃಷ್ಣನಾಗಿ ಅವತರಿಸಿದನು. ಯೋಗಿಯಾದ ಹನುಮಂತನಿಗೆ ದೇವರು ಪುನ: ಶ್ರೀಕೃಷ್ಣನಾಗಿ ಅವತರಿಸಿರುವುದು ತಿಳಿದಿತ್ತು. ಅವನು ಬಂದು ಶ್ರೀಕೃಷ್ಣನ ಸೇವೆ ಮಾಡಿದನು. ಆದರೆ ಅವನಿಗೆ ಹೇಳಿದನು. ‘ನಾನು ನಿನ್ನ – ರಾಮರೂಪವನ್ನು ನೋಡಲು ಇಚ್ಛಿಸುತ್ತೇನೆ.” ಕೃಷ್ಣನು ಹೇಳಿದನು: – “ಈ ರೂಪವೇ ಸಾಲದೆ? ನಾನೇ ಕೃಷ್ಣ ನಾನೇ ರಾಮ. ಈ ಎಲ್ಲ ರೂಪಗಳೂ ನನ್ನವೇ.” ಹನುಮಂತನು ಹೇಳಿದ : “ಅದು ನನಗೆ ಗೊತ್ತು. ಆದರೆ ನನಗೆ ರಾಮನ ರೂಪವೇ ಇಷ್ಟ, ಶ್ರೀನಾಥ ಮತ್ತು ಜಾನಕೀನಾಥ ಇಬ್ಬರೂ ಒಂದೇ, “ಇಬ್ಬರೂ ಪರಮಾತ್ಮನ ಅವತಾರಗಳೇ ಆದರೂ ಕಮಲಲೋಚನನಾದ ರಾಮನೇ ನನ್ನ ಸರ್ವಸ್ವ.” ಇದು ಏಕನಿಷ್ಠೆ-ವಿವಿಧ ರೂಪದ ಪೂಜೆಗಳು

ಸರಿಯೆಂದು ಗೊತ್ತಿದ್ದರೂ ಒಂದಕ್ಕೆ ನಿಷ್ಠರಾಗಿದ್ದು ಉಳಿದವನ್ನು ನಿರಾಕರಿಸುವುದು ನಾವು ಇತರರನ್ನು ಪೂಜಿಸಕೂಡದು. ನಾವು ಅವರನ್ನು ದ್ವೇಷಿಸುವುದಾಗಲಿ ನಿಂದಿಸುವುದಾಗಲಿ ಮಾಡಕೂಡದು ಆದರೆ ಗೌರವಿಸಬೇಕು…

ಎಲ್ಲ ಧಾರ್ಮಿಕ ಭಾವನೆಗಳ ಕಡೆಗೂ ಮನಸ್ಸನ್ನು ಹರಿಸಿ ಶಕ್ತಿಯನ್ನು ವ್ಯಯಗೊಳಿಸಬಾರದು. ಕ್ರೈಸ್ತ, ಬೌದ್ಧ ಮುಂತಾದ ವಿವಿಧ ಆಧ್ಯಾತ್ಮಿಕ ಮಾರ್ಗಗಳನ್ನು ಅನುಸರಿಸಲು ಹೋಗಿ ಕೊನೆಗೆ ಯಾವುದೂ ಇಲ್ಲದಂತಾಗುತ್ತದೆ.

ಗಿಡದ ಸುತ್ತ, ಪ್ರಾಣಿಗಳು ಅದನ್ನು ತಿನ್ನದಿರಲೆಂದು ಬೇಲಿ ಕಟ್ಟಬೇಕು. ಆದರೆ ಅದು ಬೆಳೆದು ಹೆಮ್ಮರವಾದಮೇಲೆ ಯಾವ ಬೇಲಿಯ ಅವಶ್ಯಕತೆಯೂ ಇಲ್ಲ. ಹಾಗೆಯೇ ಆಧ್ಯಾತ್ಮಿಕತೆಯು ಬಿಜ ಬೆಳೆಯುತ್ತಿರುವಾಗ ಅದನ್ನು ಎಚ್ಚರಿಕೆಯಿಂದ ರಕ್ಷಿಸಬೇಕು. ಎಲ್ಲ ಧಾರ್ಮಿಕ ಭಾವನೆಗಳ ಕಡೆಗೂ ಮನಸ್ಸನ್ನು ಹರಿಸಿ ಶಕ್ತಿಯನ್ನು ವ್ಯಯಗೊಳಿಸಬಾರದು. ಕ್ರೈಸ್ತ, ಬೌದ್ಧ ಮುಂತಾದ ವಿವಿಧ ಆಧ್ಯಾತ್ಮಿಕ ಮಾರ್ಗಗಳನ್ನು ಅನುಸರಿಸಲು ಹೋಗಿ ಕೊನೆಗೆ. ಯಾವುದೂ ಇಲ್ಲದಂತಾಗುತ್ತದೆ.

ಪ್ರಾರಂಭದ ಹಂತದಲ್ಲಿ ನಾವು ಮತೀಯರಾಗುವುದು ಅನಿವಾರ್ಯ. ಆದರೆ ಆ ಮತೀಯತೆ ಯಾರನ್ನೂ ನಿರಾಕರಿಸುವುದಾಗಿರಬಾರದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಮತವಿರಬೇಕು. ಆ ಮತವೇ ನಮ್ಮ ಇಷ್ಟ-ನಮ್ಮ ಆಯ್ಕೆಯ ಮಾರ್ಗ. ಆದರೆ ಆ ಆದರ್ಶವನ್ನು ಹಿಡಿದುಕೊಳ್ಳುವುದಕ್ಕಾಗಿ ನಾವು ಇತರರನ್ನು ನಾಶ ಮಾಡಬಾರದು. ನನ್ನ ಇಷ್ಟ ನನಗೆ ಪವಿತ್ರವಾದುದು ಅದನ್ನು ನನ್ನ ಸಹೋದರನಿಗೆ ತಿಳಿಸುವಂತಿಲ್ಲ. ಪ್ರತಿಯೊಬ್ಬರಿಗೂ ಅವರವರ ಇಷ್ಟ, ಪವಿತ್ರ. ಆದ್ದರಿಂದ ಆ ಇಷ್ಟವನ್ನು ನಿಮ್ಮದಾಗಿಯೇ ಇಟ್ಟುಕೊಳ್ಳಿ. ಪ್ರತಿಯೊಬ್ಬ ಸಾಧಕನೂ ಈ ಭಾವವನ್ನು ಅನುಸರಿಸಬೇಕು. ನಿಮ್ಮ ಇಷ್ಟದೇವತೆಯನ್ನು ಪ್ರಾರ್ಥಿಸು ವಾಗ ಆ ದೇವತೆಯೊಂದೇ ನಿಮ್ಮ ಸರ್ವಸ್ವವಾಗಬೇಕು. ಭಗವಂತನ ಅನೇಕ ರೂಪಗಳಿರಬಹುದು, ಆದರೆ ಆ ಸಂದರ್ಭದಲ್ಲಿ ನಿಮ್ಮ ಇಷ್ಟದೇವತೆಯೊಂದೇ ನಿಮ್ಮ ಪಾಲಿಗಿರುವುದು.

ಈ ಇಷ್ಟಸಾಧನೆಯಲ್ಲಿ ತುಂಬ ಮುಂದುವರಿದಮೇಲೆ- ಆಧ್ಯಾತ್ಮಿಕ ಸಸಿಯು ಸಾಕಷ್ಟು ಬೆಳೆದ ಮೇಲೆ, ನಿಮ್ಮ ಅಂತರಂಗವು ಬಲಿಷ್ಠವಾದ ಮೇಲೆ, ಮತ್ತು ನಿಮ್ಮ ಇಷ್ಟದೇವತೆಯೇ ಎಲ್ಲೆಲ್ಲಿಯೂ ಇರುವುದೆಂದೂ ಅರಿತಮೇಲೆ-ಸ್ವಾಭಾವಿಕವಾಗಿಯೇ ಈ ಎಲ್ಲ ಬಂಧನಗಳೂ ಕಳಚಿಬೀಳುವುವು. ಹಣ್ಣು ಗಳಿತಮೇಲೆ ತನ್ನ ಭಾರದಿಂದಲೇ ಕೆಳಕ್ಕೆ ಬೀಳುತ್ತದೆ. ನೀವು ಅಪಕ್ವವಾದ ಹಣ್ಣನ್ನು ಕಿತ್ತರೆ ಅದು ಹುಳಿಯಾಗಿರುತ್ತದೆ. ಆದ್ದರಿಂದ ನಾವು ಈ ಆಲೋಚನೆಯಲ್ಲಿ ಬೆಳೆಯಬೇಕು.

ಒಂದು ಭಾವನೆಯನ್ನು ತೆಗೆದುಕೊಳ್ಳಿ, ಒಂದು ಇಷ್ಟವನ್ನು ಸ್ವೀಕರಿಸಿ. ನಿಮ್ಮ ಇಡೀ ವ್ಯಕ್ತಿತ್ವವನ್ನು ಅದಕ್ಕೆ ಅರ್ಪಿಸಿ. ಪ್ರತಿಫಲ ದೊರೆಯುವವರೆಗೂ, ನಿಮ್ಮಾತ್ಮ ಬೆಳೆಯುವವರೆಗೂ ದಿನದಿನವೂ ಅದನ್ನೇ ಅಭ್ಯಾಸ ಮಾಡುತ್ತ ಹೋಗಿ. ಸಾಧನೆ ಪ್ರಾಮಾಣಿಕವಾಗಿದ್ದರೆ, ಸರಿಯಾಗಿದ್ದರೆ, ಆ ಇಷ್ಟವೇ ಸಾಲವಾಗುತ್ತ ಹೋಗಿ, ಇಡೀ ವಿಶ್ವವ್ಯಾಪ್ತಿಯಾಗುತ್ತದೆ. ಅದು ತಾನಾಗಿಯೇ ಬೆಳೆಯಲಿ, ಅದು ಒಳಗಿನಿಂದ ಹೊರಗೆ ಬೆಳೆಯುತ್ತದೆ. ಆಗ ನಿಮ್ಮ ಇಷ್ಟವೇ ಎಲ್ಲೆಲ್ಲಿಯೂ ಇದೆ ಅದೇ ಎಲ್ಲವೂ ಆಗಿದೆ ಎಂದು ಹೇಳುತ್ತೀರಿ.

ಈ ನಿಷ್ಠಾಭಕ್ತಿಯ ಒಂದು ಅಪಾಯವೇ ಅದು ರಾಕ್ಷಸೀಯ – ಮತಾಂಧತೆಯಾಗಿ ಪರಿಣಮಿಸುವುದು. ಪ್ರಪಂಚ ಇಂಥವರಿಂದ – ತುಂಬಿ ಹೋಗುವುದು. ದ್ವೇಷಿಸುವುದು ಬಹಳ ಸುಲಭ. ಜನ ಸಾಮಾನ್ಯರು ಎಷ್ಟು ದುರ್ಬಲರಾಗಿರುತ್ತಾರೆಂದರೆ, ಒಬ್ಬನನ್ನು ಪ್ರೀತಿಸಬೇಕಾದರೆ ಮತ್ತೊಬ್ಬನನ್ನು ದ್ವೇಷಿಸುತ್ತಾರೆ. ಒಂದರಲ್ಲಿ ಅವರು ಶಕ್ತಿಯನ್ನು ಕೇಂದ್ರೀಕರಿಸಬೇಕಾದರೆ ಮತ್ತೊಂದರಿಂದ ಅದನ್ನು ತೆಗೆಯಬೇಕು. ಒಬ್ಬ ಪರುಷನು ಒಬ್ಬ ಮಹಿಳೆಯನ್ನು – ಪ್ರೀತಿಸುತ್ತಾನೆ, ಆನಂತರ ಮತ್ತೋರ್ವಳನ್ನು ಪ್ರೀತಿಸುತ್ತಾನೆ. ಹೀಗೆ ಮತ್ತೋರ್ವಳನ್ನು ಪ್ರೀತಿಸಬೇಕಾದರೆ ಮೊದಲಿನವಳನ್ನು ಅವನು ದ್ವೇಷಿಸಲೇಬೇಕು. ಸ್ತ್ರೀಯರ ವಿಷಯವೂ ಹೀಗೆಯೇ. ಈ ಲಕ್ಷಣ ನಮ್ಮ ಸ್ವಭಾವದಲ್ಲಿಯೇ ಇದೆ, ಆದ್ದರಿಂದ ಅದು ಧರ್ಮದಲ್ಲಿಯೂ ಇದೆ. ಅಪಕ್ವ ಮನಸ್ಸಿನ ಸಾಮಾನ್ಯ ವ್ಯಕ್ತಿಯು ಇನ್ನೊಬ್ಬನನ್ನು ದ್ವೇಷಿಸದೆ ಒಬ್ಬನನ್ನು ಪ್ರೀತಿಸಲಾರನು ಈ ಲಕ್ಷಣವೇ ಧರ್ಮದಲ್ಲಿ ಮಾತಾಂಧತೆಯಾಗಿ ಕಾಣಿಸಿಕೊಳ್ಳುವುದು. ತಮ್ಮ ಆದರ್ಶವನ್ನು ಪ್ರೀತಿಸುವುದೆಂದರೆ ಇತರ ಎಲ್ಲ ಆದರ್ಶಗಳನ್ನೂ ದ್ವೇಷಿಸುವುದು.

ಇದನ್ನು ನಿವಾರಿಸಬೇಕು. ಇದೇ ಸಂದರ್ಭದಲ್ಲಿ ಬೇರೆ ಅಪಾಯವನ್ನೂ ನಿವಾರಿಸಬೇಕು. ನಮ್ಮ ಶಕ್ತಿಯನ್ನು ವೃಥಾ ವ್ಯಯ ಮಾಡಬಾರದು. ಹಾಗೆ ಮಾಡಿದರೆ ಧರ್ಮವೆಂದರೆ ನಮ್ಮ ಪಾಲಿಗೆ ಕೇವಲ ಉಪನ್ಯಾಸ ಕೇಳುವುದಾಗುತ್ತದೆ-ಅದಕ್ಕಿಂತ ಹೆಚ್ಚಲ್ಲ. ಇನ್ನು ಎರಡು ಅಪಾಯಗಳು ಉದಾರ ಮನಸ್ಸಿನವರಲ್ಲಿ – ವೈಶಾಲ್ಯತೆಯಿರುತ್ತದೆ, ತೀವ್ರತೆಯಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಧರ್ಮವು ತುಂಬ ವಿಶಾಲವಾಗುತ್ತಿದೆ. ಆದರೆ ಭಾವನೆಗಳು
ವಿಶಾಲವಾದಷ್ಟೂ ಗಂಭೀರತೆಯನ್ನು ಕಳೆದುಕೊಳ್ಳುತ್ತವೆ. ಅನೇಕರಿಗೆ ಧರ್ಮವೆಂದರೆ ಸ್ವಲ್ಪ ದಾನಮಾಡುವದು ಮತ್ತು ಶ್ರಮ ಪರಿಹಾರಕ್ಕಾಗಿ ಸ್ವಲ್ಪ ಮನರಂಜನೆಯನ್ನು ಪಡೆಯುವುದು-ಮನ ರಂಜನೆಗಾಗಿ ಅವರಿಗೆ ಐದು ನಿಮಿಷದ ಧರ್ಮ ಸಾಕು. ಉದಾರ ಭಾವನೆಯ ಅಪಾಯ ಇದು. ಇನ್ನೊಂದು ಕಡೆ ಮತೀಯ ಮನೋಭಾವದವರಲ್ಲಿ ಆಳವಿರುತ್ತದೆ, ತೀವ್ರತೆಯಿರುತ್ತದೆ, ಆದರೆ ಆ ತೀವ್ರತೆ ತುಂಬ ಸಂಕುಚಿತವಾಗಿರುತ್ತದೆ. ಅವರಲ್ಲಿ “ಗಂಭೀರತೆಯಿದೆ, ಆದರೆ ವೈಶಾಲ್ಯತೆಯಿಲ್ಲ. ಅಷ್ಟೇ ಅಲ್ಲದೆ ಇದರ ಪರಿಣಾಮವಾಗಿ ಅವರು ಎಲ್ಲರನ್ನೂ ದ್ವೇಷಿಸುತ್ತಾರೆ.

ಅತ್ಯಂತ ಉದಾರಿಗಳಲ್ಲಿರುವ ವೈಶಾಲ್ಯತೆಯನ್ನೂ ಕ್ರೂರ ಮತಾಂಧರಲ್ಲಿರುವ ಗಭೀರತೆಯನ್ನೂ ಪಡೆಯಬೇಕು.

ಈ ಎರಡೂ ಅಪಾಯಗಳನ್ನು ನಿವಾರಿಸಿ, ಅತ್ಯಂತ ಉದಾರಿಗಳಲ್ಲಿರುವ ವೈಶಾಲ್ಯತೆಯನ್ನೂ ಕ್ರೂರ ಮುತಾಂಧರಲ್ಲಿರುವ ಗಭೀರತೆಯನ್ನೂ ಪಡೆದಾಗ ಸಮಸ್ಯೆಯ ಪರಿಹಾರವಾಗುತ್ತದೆ. ಇದನ್ನು ಸಾಧಿಸುವುದು ಹೇಗೆ ಎಂಬುದು ಪ್ರಶ್ನೆ. ಇಷ್ಟ-ನಿಷ್ಠೆಯ ಸಿದ್ಧಾಂತವೇ ಅದಕ್ಕೆ ಮಾರ್ಗ, ಎಲ್ಲ ಆದರ್ಶಗಳೂ ಸತ್ಯ ಮತ್ತು ಯಥಾರ್ಥ ಎಂದು ತಿಳಿಯಬೇಕು; ಇವೆಲ್ಲವೂ ಒಂದೇ ದೇವರ ವಿವಿಧ ಮುಖಗಳು; ಆದರೆ ಈ ಎಲ್ಲ ರೂಪಗಳ ಮೂಲಕ ದೇವರನ್ನು ಪೂಜಿಸಲು ನಾವಿನ್ನೂ ಅಸಮರ್ಥರು, ಆದ್ದರಿಂದ ಒಂದು ಆದರ್ಶವನ್ನು ಹಿಡಿದುಕೊಂಡು, ಅದನ್ನೇ ನಮ್ಮ ಜೀವನ ಸರ್ವಸ್ವವನ್ನಾಗಿ ಮಾಡಿಕೊಳ್ಳಬೇಕು. ಇದರಲ್ಲಿ ನೀವು ಯಶಸ್ವಿಯಾದರೆ ಉಳಿದದ್ದೆಲ್ಲ ತಾನಾಗಿಯೇ ಬರುತ್ತದೆ.

ಮುಂದಿನ ಪಾಠವು ಪ್ರತೀಕಗಳಿಗೆ ಸಂಬಂಧಿಸಿದುದು. ದೇವರನ್ನು ಪೂಜಿಸುವುದೇ ಭಕ್ತಿ, ಇನ್ನಾರನ್ನಾದರೂ ಪೂಜಿಸುವುದು ಭಕ್ತಿಯಲ್ಲ. ಆದರೆ ಯಾವುದನ್ನಾದರೂ ದೇವರು ಎಂಬ ಭಾವದಿಂದ ಪೂಜಿಸಬಹುದು. ಅದನ್ನು ದೇವರು ಎಂದು ತಿಳಿಯದಿದ್ದರೆ ಆ ಪೂಜೆ ಭಕ್ತಿ ಎನಿಸುವುದಿಲ್ಲ. ಅದನ್ನು ದೇವರು ಎಂದು ಭಾವಿಸಿದರೆ ಅದು ಸರಿ.

ನದೀ ತೀರದ ಅರಣ್ಯ ಪ್ರದೇಶದಲ್ಲಿ ಯೋಗಿಯೊಬ್ಬನು ಧ್ಯಾನಾಭ್ಯಾಸ ಮಾಡುತ್ತಿದ್ದ. ಬಡ ಗೋಪಾಲಕನೊಬ್ಬನು ಅದೇ ಸ್ಥಳದು ಹಸುಗಳನ್ನು ಮೇಯಿಸುತ್ತಿದ್ದ. ಪ್ರತಿದಿನವೂ ಆತ ಈ ಯೋಗಿಯು ಗಂಟೆಗಟ್ಟಳೆ ಧ್ಯಾನ ಮಾಡುವುದನ್ನೂ ತಪಸ್ಸು ಆಚರಿಸುವುದನ್ನೂ ಆಧ್ಯಯನ ಮಾಡುವುದನ್ನೂ ನೋಡುತ್ತಿದ್ದ. ಅವನು ಏನು ಮಾಡುತ್ತಾನೆ ಎಂಬುದನ್ನು ತಿಳಿಯುವ ಕುತೂಹಲವುಂಟಾಯಿತು ಗೋಪಾಲಕನಿಗೆ. ಅವನು ಯೋಗಿಯ ಹತ್ತಿರ ಬಂದು ಕೇಳಿದ: “ಸ್ವಾಮಿ, ದೇವರನ್ನು ಪಡೆಯುವ ಮಾರ್ಗವನ್ನು ನನಗೆ ಬೋಧಿಸುತ್ತೀರಾ? ಆ ಯೋಗಿಯು ದೊಡ್ಡ ಪಂಡಿತನೂ ಶ್ರೇಷ್ಠ ವ್ಯಕ್ತಿಯೂ ಆಗಿದ್ದ. ಅವನು ಹೇಳಿದ: “ನೀನು ಸಾಮಾನ್ಯ ಗೋವಳ -ದೇವರನ್ನು ನೀನು ಹೇಗೆ ಅರ್ಥಮಾಡಿಕೊಳ್ಳಬಲ್ಲೆ? ದಡ್ಡ, ಸುಮ್ಮನೆ ಮನೆಗೆ ಹೋಗಿ ಹಸುವನ್ನು ಮೇಯಿಸಿಕೊಂಡಿರು. ಇಂಥ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ.”

ಆ ಮನುಷ್ಯ ಹೊರಟುಹೋದ. ಆದರೆ ನಿಜವಾದ ಬಯಕೆ ಅವನಲ್ಲಿ ಜಾಗ್ರತವಾಯಿತು. ಅವನು ಸುಮ್ಮನಿರಲಾಗದೆ ಮತ್ತೆ ಯೋಗಿಯ ಹತ್ತಿರ ಬಂದು ಕೇಳುತ್ತಾನೆ:”ಸ್ವಾಮಿ, ದೇವರ ಬಗ್ಗೆ ನನಗೆ ಏನಾದರೂ ಹೇಳುತ್ತೀರಾ?” ಮತ್ತೆ ಅದೇ ನಿರಾಕರಣೆ : “ಆಹ್, ನೀನು ದಡ್ಡ, ದೇವರ ಬಗ್ಗೆ ನೀನು ಏನು ತಿಳಿಯಬಲ್ಲೆ? ಮನೆಗೆ ಹೋಗು.” ಆದರೆ ಗೋಪಾಲಕನಿಗೆ ನಿದ್ರೆ ಮಾಡಲಾಗಲಿಲ್ಲ, ಊಟವೂ ರುಚಿಸಲಿಲ್ಲ. ತಾನು ದೇವರ ಬಗ್ಗೆ ತಿಳಿಯಲೇಬೇಕು ಎಂದೆನಿಸಿತು ಅವನಿಗೆ. ಅವನು ಮತ್ತೆ ಬಂದನು. ಅವನನ್ನು ಸುಮ್ಮನಾಗಿಸಲು ಯೋಗಿಯು ಹೇಳಿದ: “ಆಗಲಿ, ನಿನಗೆ ದೇವರನ್ನು ಬೋಧಿಸುತ್ತೇನೆ.”

ಅವನು ಕೇಳಿದ: “ಸ್ವಾಮಿ, ದೇವರು ಎಂಥವನು? ಅವನ ರೂಪ ಯಾವುದು? ಅವನು ಹೇಗೆ ಕಾಣುತ್ತಾನೆ?”

ಯೋಗಿಯು ಹೇಳಿದ: “ದೇವರು ನಿನ್ನ ಹಸುವಿನ ಮಂದೆಯಲ್ಲಿರುವ ದೊಡ್ಡ ಬಸವನಂತಿದ್ದಾನೆ. ಅದೇ ದೇವರು. ದೇವರು ಆ ದೊಡ್ಡ ಬಸವನಾಗಿದ್ದಾನೆ.” ಗೋಪಾಲಕನು ಅವನ ಮಾತನ್ನು ನಂಬಿ ಹಿಂತಿರುಗಿದ. ಆ ಬಸವನನ್ನೇ ದೇವರೆಂದು ತಿಳಿದು ಹಗಲು ರಾತ್ರಿ ಅದನ್ನು ಪೂಜಿಸತೊಡಗಿದ. ಒಳ್ಳೆಯ ಹಸಿರು ಹುಲ್ಲನ್ನು ಅದಕ್ಕೆ ತಿನಿಸಿದ, ಅದರ ಹತ್ತಿರವೇ ವಿಶ್ರಮಿಸುತ್ತಿದ್ದೆ, ಅದಕ್ಕೆ ಧೂಪ ದೀಪಗಳನ್ನು ಅರ್ಪಿಸಿದ ಮತ್ತು ಅದನ್ನೇ ಅನುಸರಿಸಿದ. ಹೀಗೆ ದಿನ ತಿಂಗಳು ವರ್ಷಗಳು ಉರುಳಿದವು. ಅವನ ಪೂರ್ಣ ಆತ್ಮವೇ ಆ ಬಸವನಲ್ಲಿ ನೆಲೆಗೊಂಡಿತ್ತು.

ಒಂದು ದಿನ ಅವನಿಗೆ ಒಂದು ಧ್ವನಿ ಕೇಳಿಸಿತ್ತು-ಅದು ಬಸವನೊಳಗಿನಿಂದ ಬರುತ್ತಿರುವುದನ್ನು ಗಮನಿಸಿದ. “ಬಸವ ಮಾತನಾಡುತ್ತಿರುವುದು ಎಂದು ಅವನು ಚಕಿತನಾದ.

“ವತ್ಸ, ವತ್ಸ.”

“ಏನು ಬಸವ ಮಾತನಾಡುತ್ತಿರುವುದೆ! ಇಲ್ಲ, ಬಸವ ಮಾತನಾಡಲಾರದು.”

ಅತ್ತ ಸರಿದು ತುಂಬ ಖಿನ್ನನಾಗಿ ಧ್ಯಾನ ಮಾಡುತ್ತ ಕುಳಿತನು. ಅವನಿಗೆ ಏನೂ ತಿಳಿಯಲಿಲ್ಲ. ಮತ್ತೆ ಬಸವನೊಳಗಿನಿಂದ ಧ್ವನಿ ಕೇಳಿಸಿತು: “ವತ್ಸ, ವತ್ಸ”. ಅವನು ಹತ್ತಿರ ಹೋದ.

“ಇಲ್ಲ, ಬಸದ ಮಾತನಾಡಲಾರದು,” ಎಂದು ಭಾವಿಸಿ, ಹಿಂತಿರುಗಿ ವಿಷಾದದಿಂದ ಕುಳಿತುಕೊಂಡ.

ಮತ್ತೆ ಧ್ವನಿ ಕೇಳಿಸಿತು. ಈಗ ಅವನು ಕಂಡುಹಿಡಿದ, ತನ್ನ ಹೃದಯದಿಂದಲೇ ಧ್ವನಿ ಬರುತ್ತಿತ್ತು. ದೇವರು ತನ್ನೊಳಗೇ ಇರುವನೆಂದು ಅವನಿಗೆ ತಿಳಿಯಿತು.

“ನಾನು ಯಾವಾಗಲೂ ನಿನ್ನೊಡನೆ ಇದ್ದೇನೆ” ಎಂಬ ಭಗವದ್ವಾಣಿಯ ಅದ್ಭುತ ಸತ್ಯ ಅವನಿಗೆ ಅರ್ಥವಾಯಿತು. ಬಡ ಗೋವಳನಿಗೆ ಇಡೀ ರಹಸ್ಯ ಅರ್ಥವಾಯಿತು.

ಅನಂತರ ಅವನು ಯೋಗಿಯನ್ನು ನೋಡಲು ಹೋಗುತ್ತಾನೆ. ಯೋಗಿಯು ಅವನನ್ನು ದೂರದಿಂದ ಬರುತ್ತಿರುವಾಗಲೇ ನೋಡಿದ. ಯೋಗಿಯು ದೊಡ್ಡ ಪಂಡಿತ, ಮಹಾತಪಸ್ವಿ. ಈ ಗೋಪಾಲಕನಾದರೊ ದಡ್ಡ, ನಿರಕ್ಷರಕುಕ್ಷಿ. ಆದರೆ ಅವನ ಇಡೀ ದೇಹವೇ ಪರಿವರ್ತನೆಗೊಂಡಂತೆ ಕಾಣುತ್ತಿದೆ, ಸ್ವರ್ಗೀಯ ಜ್ಯೋತಿ ಅವನ ಮುಖದಲ್ಲಿ ಬೆಳಗುತ್ತಿದೆ. ಯೋಗಿಯು ಎದ್ದು ನಿಂತನು.

“ಇದು ಎಂಥ ಬದಲಾವಣೆ? ಇದು ಹೇಗಾಯಿತು?”

“ಸ್ವಾಮಿ, ಇದು ನಿಮ್ಮ ಅನುಗ್ರಹ.”

“ಅದು ಹೇಗೆ? ನಾನು ನಿನಗೆ ಅದನ್ನು ತಮಾಷೆಗೆ ಹೇಳಿದೆ.”

“ಆದರೆ ನಾನು ಅದನ್ನು ಗಂಭೀರವಾಗಿ ಸ್ವೀಕರಿಸಿದೆ. ನಾನು ಆ ಬಸವನಿಂದಲೇ ನಾನು ಬಯಸಿದುದೆಲ್ಲವನ್ನೂ ಪಡೆದೆ. ಏಕೆ, ದೇವರು ಎಲ್ಲೆಲ್ಲಿಯೂ ಇಲ್ಲವೇನು?”

ಆದ್ದರಿಂದ ಇಲ್ಲಿ ಆ ಬಸವನೇ ಪ್ರತೀಕ. ಆ ವ್ಯಕ್ತಿಯು ಆ ಪ್ರತೀಕವನ್ನೇ ದೇವರೆಂದು ಪೂಜಿಸಿ ಎಲ್ಲವನ್ನೂ ಪಡೆದ. ಆ ತೀವ್ರ ಪ್ರೀತಿ, ಆ ತೀವ್ರ ಬಯಕೆ ಎಲ್ಲವನ್ನೂ ಸಾಧಿಸಿಕೊಡುತ್ತದೆ. ಎಲ್ಲವೂ ನಮ್ಮೊಳಗೇ ಇದೆ. ಬಾಹ್ಯ ಜಗತ್ತು, ಬಾಹ್ಯ ಪೂಜೆ ಅದನ್ನು ಹೊರಪಡಿಸುವುದಕ್ಕೆ ಒಂದು ಸೂಚನೆಯಷ್ಟೆ. ಅದು ಬಲಯುತವಾದಾಗ ಒಳಗಿರುವ ದೇವರು ಜಾಗ್ರತನಾಗುತ್ತಾನೆ.

ನಾಮಜಪ, ಪ್ರತೀಕೊಪಾಸನೆ, ಇಷ್ಟನಿಷ್ಠೆ -ಇವೆಲ್ಲ ಭಕ್ತಿಯ ಬಾಹ್ಯ ರೂಪಗಳು. ಇವು ಆ ಶಾಶ್ವತ ಶಕ್ತಿಯು ಜಾಗ್ರತವಾಗುವುದಕ್ಕೆ ಸಿದ್ಧತೆಗಳು. ಈ ಎಲ್ಲ ವಿಧಿ ನಿಯಮಗಳನ್ನು ಮೀರಿ ಹೋದ ಮೇಲೆ ನಿಜವಾದ ಆಧ್ಯಾತ್ಮಿಕತೆ ಬರುತ್ತದೆ. ಆಗ ಎಲ್ಲ ನಿಯಮಗಳು ಕಳಚಿಬೀಳುವುವು, ಎಲ್ಲ ರೂಪಗಳು ಮಾಯವಾಗುವುವು, ದೇವಸ್ಥಾನ ಚರ್ಚುಗಳೆಲ್ಲ ಉರುಳಿ ಮಣ್ಣು ಪಾಲಾಗುವುವು. ಭಗವಂತನ ಸಂತಾನವನ್ನು ಯಾವ ಮತ ತಾನೇ ಕಟ್ಟಿಹಾಕಬಲ್ಲದು? ಅವನಿಗೆ ಯಾವ ನಿಯಮವಿದೆ? ಅವನು – ಅನುಸರಿಸಬೇಕಾದ ಕ್ರಿಯಾವಿಧಿಗಳಾವುವಿವೆ? ಅವನು ಪೂಜಿಸುವುದಾದರೂ ಯಾರನ್ನು? ಅವನು ಪರಮಾತ್ಮನನ್ನೇ ಪೂಜಿಸುತ್ತಾನೆ. ಪರಮಾತ್ಮನೇ ಅವನಿಗೆ ಬೋಧಿಸುತ್ತಾನೆ. ದೇವಾಲಯಗಳಲ್ಲೆಲ್ಲ ಅತ್ಯಂತ ಶ್ರೇಷ್ಠ ದೇವಾಲಯವಾದ ಮಾನವನ ಆತ್ಮದಲ್ಲಿ ಅವನು ವಾಸಿಸುತ್ತಾನೆ.

ಇದೇ ನಾವು ಪಡೆಯಬೇಕಾದ ಗುರಿ, ಇದೇ ಪರಾಭಕ್ತಿ. ಉಳಿದುವೆಲ್ಲ ಗೌಣ. ಆದರೆ ಅವು ಈ ಸ್ಥಿತಿಯನ್ನು ಪಡೆಯಲು ಆವಶ್ಯಕ. ಅನಂತಾತ್ಮವು ಗ್ರಂಥಗಳು, ಮತಗಳು ಮತ್ತು ಕ್ರಿಯಾವಿಧಿಗಳ ಬಂಧನದಿಂದ ಹೊರಬರಲು ಇವು ಸಹಾಯಕವಾಗುತ್ತವೆ. ಇವು ಕೊನೆಯಲ್ಲಿ ಅದೃಶ್ಯವಾಗಿ ಆತ್ಮನನ್ನು ಹಾಗೆಯೇ ಉಳಿಸುತ್ತವೆ. ಇವು ಅನಂತಕಾಲದಿಂದ ಬಂದ ಮೂಢ ನಂಬಿಕೆಗಳು. ಇದು ನನ್ನ ತಂದೆಯ ಧರ್ಮ, ಇದು ನನ್ನ ದೇಶದ ಧರ್ಮ, ಇದು ನನ್ನ ಗ್ರಂಥ – ಮುಂತಾದುವುಗಳೆಲ್ಲ ತಲೆ

ತಲಾಂತರದಿಂದ ಬಂದ ಮೂಢನಂಬಿಕೆಗಳು, ಇವೆಲ್ಲ ಮಾಯ ವಾಗುತ್ತವೆ. ಇದು ಒಂದು ಮುಳ್ಳಿನಿಂದ ಮತ್ತೊಂದು ಮುಳ್ಳನ್ನು
ಯಮ. – ಅನೇಕ ದೇಶಗಳಲ್ಲಿ, ಎಳೆಯ ಮಗುವಿನಲ್ಲಿಯೂ ಕೂಡ, ಅತ್ಯಂತ ಭಯಂಕರವಾದ, ಬರ್ಭರವಾರ ಮತೀಯ ಭಾವನೆ rಳನ್ನು ತುಂಬುತ್ತಾರೆ. ತಂದೆತಾಯಿಯರು ತಾವು ಮಗುವಿಗೆ ಒಳ್ಳೆಯದನ್ನು ಮಾಡುತ್ತಿರುವೆವು ಎಂದು ಭಾವಿಸುವೆ. ಸಂಪ್ರದಾಯಶಾಲನೆಯ ಹೆತಲ್ಲಿ ಮಗುವಿಗೆ ಹಾನಿಯುಂಟು ಮಾಡುತ್ತಿರುವೆವು ಎಂಬುದು ಅವರಿಗೆ ತಿಳಿಯದು. ಇದೆಲ್ಲ ಸ್ವಾರ್ಥತ, ತಮ್ಮ ತೃಪ್ತಿಗಾಗಿ, ಸಮಾಜವನ್ನು ತೃಪ್ತಿಪಡಿಸುವುದೆ ಾಗಿ ಜನರು ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ತಮ್ಮ ಮಕ್ಕ ಇನ್ನೇ ಬೇಕಾದರೆ ಕೊಲ್ಲುತ್ತಾರೆ, ತಾಯಂದಿರು ಕುಟುಂಬವನ್ನು (ಬನವಾಸ ಶೆಡುವುತ್ತಾರೆ, ಸಹೋದರರು ಸಹೋದರರನ್ನು ದ್ವೇಷಿಸುತ್ತಾರೆ. ಇದೆಲ್ಲ ಯಾರನ್ನೋ ತೃಪ್ತಿವಡಿಸುವುದಷ್ಯಾಗಿ
ಬಹುಪಾಲು ಜನರು ಯಾವುದೋ ಒಂದು ಸಾಂಪ್ರದಾಯಿಕ ಧರ್ಮದಲ್ಲಿ ಜನಿಸಿ ಅಲ್ಲಿಂದ ಹೊರಬರುವುದೇ ಇಲ್ಲ, ಏಕೆ? ಈ ಸಂಪ್ರದಾಯಗಳು ಅಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ವಾಗಿರುವವೆ? ಇವುಗಳ ಮೂಲಕ ಪ್ರೀತಿಯ ಅತ್ಯುನ್ನತ ನಲೆ ಚನ್ನು ತೇಲಪಬಹುದಾದರೆ, ಬಹುಪಾಲು ಜನರು ಇನ್ನೂ ಯಾಭದಾದರೂ ಸಹ್ರದಾಯಕ್ಕೆ ಒಳ್ಳಲt) ಸರಳುತ್ತಿರುವರಲ್ಲ ಎಕೆ? ಮಹಿಮೆ ಭಾವನೆಗಳನ್ನು ಮೀರಿಹೋಗಲಿಲ್ಲವಲ್ಲ, ಏಕೆ? ಅವರು ನಾಸ್ತಿಕರು, ಅವರಿಗೆ ಯಾವ ಧರ್ಮವೂ ಬೇಕಿಲ್ಲ,
ದೇವಸ್ಥಾನ ಮತ್ತು ಇತರ್ಚುಗಳಲ್ಲಿ ಮಂಡಿಯೂರುವುದು, ಕೈಮುಗಿಯುವುದು,
ಸಾಷ್ಟಾಂಗ ಪ್ರಣಾಮ ಮಾಡುವುದು, ಕಣ್ಣು ಮುಚ್ಚುವುದು ಎಲ್ಲ ಕವಾಯಿತೆ ಯಾಂತ್ರಿಕವಾಗಿ ನಡೆಯುತ್ತದೆ. ಮನಸ್ಸು ಮಾತ್ರ ಬೇರಲ್ಲೂ ಇರುತ್ತದೆ. ಇದಾವುದೂ ನಿಜವಾದ
ನೀವು ಏನನ್ನು ಬಯಸುತ್ತೀರೊ ನಿಮಗದು ದೊರೆಯುತ್ತದೆ. – ಆರತು ಎಲ್ಲ ಆಸಳನ್ನೂ ಪrಳಿಸುತ್ತಾನೆ. ಸಮಾಜ – ದ ಓದು ಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ನೀವು ಬರಿಯು
ದರೆ, ನಿಮಗಿದು ದೊರೆಯುತ್ತದೆ. ನಿಮrk ಚರ್ಚು ಬೇಕಾದರೆ – ಅದು ಸಿಕ್ಕುತ್ತದೆ, ಆದರೆ ದೇವರು ಸಿಕ್ಕುವುದಿಲ್ಲ. ಈ ಎಲ್ಲ
ಚಿರ್ತಗಳು, ಸಂಸ್ಥೆಗಳ ಮಕ್ಕಳಾಟದಲ್ಲಿ ತೊಡಗಿರಬೇಕೆಂದು ನೀವು ಬಯಸಿದರೆ, ಅದರಲ್ಲಿಯೇ ನೀವು ಕೊನೆಯವರೆಗೂ ಇರ ಬೇಕಾಗುತ್ತದೆ. ‘ಒರ್ಕ್ಟಗಳನ್ನು ಭಜಿಸುವವರು ಚಿತ್ರಗಳನ್ನು ಕಡೆ ಯಾರೆ ಭೂತಾರಾಧಕರು ಭೂಮಿಗಳನ್ನು ಪಡೆಯುತ್ತಾರೆ. ಆದರೆ ದೇವರನ್ನು ಪ್ರೀತಿಸುವವರು ದೇವರನ್ನೇ ಪಡೆಯುತ್ತಾರೆ.”

ದೇವರನ್ನು ಪ್ರೀತಿಸುವವರು ಅವನೆಡೆಗೆ ಹೋಗುತ್ತಾರೆ, ಇತರರನ್ನು ಪ್ರೀತಿಸುವವರು ಅವರ ಪ್ರೀತಿಯ ವಸ್ತುವನ್ನು ಸೇರುತ್ತಾರೆ.
ಸುಮಾರು ನಾಪರು ಪಶrಳ ಹಿಂದೆ ಭಾರತದಲ್ಲಿ ಗುರು ನಾನಸ್ ಎಂಬ ಶ್ರೇಷ್ಠ ಸಂತನಿದ್ದ. ಯೊದ್ರಗಳಾದ ಸಿಖ್ ಜನರ ಬಗ್ಗೆ ನೀವು ಕೇಳಿರಬಹುದು. ಗುರುನಾನರನು ಸಿಖ್ ಧರ್ಮದ
ಒಂದು ಜನ ಕ್ರಮ ಮಹಮ್ಮದೀಯರ ಮದಿಗೆ ಹೋಗಿ ತಾನೆ. ಅವಳ ದೇಶದಲ್ಲಿಯೇ ಮಹಮದಲೆದು Cr ಭಯ ಕೈಸ್ತ ದೇಶದಲ್ಲಿಯಂತೆಯೇ ಯಾರೂ ತಮ್ಮ ಧರ್ಮದ ವಿರುದ್ದ ಒಂದು ಮಾತ್ರ ಎತ್ತುವರಿಸಿಲ್ಲ. ಗುರುವಾದಶನು ಮಸೀದಿಯ ಒಳಗೆ ಹೋದನು. ಮಹರ್ಮನಿಯರು ಪ್ರಾರ್ಥನೆ ಗಾಗಿ ನಿಂತಿದ್ದರು. ಅವರು ಸಾಲಾಗಿ ನಿಲ್ಲುತ್ತಾರೆ, ಕೆಳಗೆ ಬಗ್ಗು ಪಾತ್ರ ಮೇಲೆಳುತ್ತಾರೆ, ಅದೇ ಸಂದರ್ಭ ಜಯಲ್ಲಿ ಏನೋ ೮೦ಚ್ಚರಿಸುತ್ತಾರೆ, ಇದಕ್ಕೆ ಒಬ್ಬ ಮುಂದಾಳಿರುತ್ತಾನೆ. ಗುರು ನಾನಶನು ಅಲ್ಲಿಗೆ ಹೋದನು. ಮುಲ್ಲಾನು, “ಗುರುಗಳಿಗೆ ಗುರು ವಾದ ಆತ್ಯ ದಯಾಮಯನಾದ ಭಗವಚನ ಇಸನಲ್ಲಿ ಎಂದು ಹೇಳಿದಾಗ ಗುರುನಾನಕವು ಮಗುಳ್ಳು ಹೇಳಿದನು, ಇwಇದು ರ್ಛಾಕತೆಯ ಸೋr.” ಮೆಲ್ಲಾನು ಕೋಪೋದ್ರಿಕ್ತ ನಾಗಿ, “ಯಾಕೆ ನೆಗಟ್ಟಿರುವೆ?” ಎಂದು ನು. “ಏಕೆಂದರೆ ನೀವು ಪ್ರಾರ್ಥಿಸುತ್ತಿಲ್ಲ, ಅದಕ್ಕೇ ನಕ್ಕೆ.” “ಏನು, ಪ್ರಾರ್ಥಿಸುತ್ತಿಲ್ಲವೇ?” “ಖಂಡಿತ ಇಲ್ಲ. ನಿಮ್ಮಲ್ಲಿ ಪ್ರಾರ್ಥನೆಯೆಂಬುದೇ ಇಲ್ಲ.
ಮೆಲ್ಲಾನು ಕೋಪದಿಂದ ಮ್ಯಾಟ್ ಹತ್ತಿರ ಹೋಗಿ ಛತ್ರವು “ಈ ಪಾಪುರನು ನಮ್ಮ ಮr1 ರು ನಾವು ಪ್ರಾರ್ಥಿಸುವುದನ್ನು ನೋಡಿ ಅಣಕಿಸುತ್ತಾನ ಇಮಗೆ ಒಂದೇ ಕಿತ್ಸೆ ಯೆಂದರೆ ಮಲೆಣರು ಕೂಡಲೇ ಇವನನ್ನು ಕೊಲ್ಲಿ.”
ಗುರುವಾಹನನ್ನು ಪ್ರೊಸ ಮನೆ ಕರೆತರಲಾಯಿತು. ಮಗುಗೆಗೆ ಕಾರಣವನ್ನು ಕೇಳಿದಾಗ ಅವನಂದನು; “ಅವರು ಪ್ರಾರ್ಥಿಸುತ್ತಿರಲಿಲ್ಲ, ಅದಕ್ಕೆ.” “ಅವರು ಏನು ಮಾಡುತ್ತಿದ್ದರು?” ಮ್ಯಾಜಿಸ್ಟೆಂಟ್ ಕೇಳಿದ. “ಅವರನ್ನು ಇಲ್ಲಿಗೆ ಕರೆಸಿದರೆ ಅವರು ಏನು ಮಾಡುತ್ತಿದ್ದರು ಎಂಬುದನ್ನು ಹೇಳುತ್ತೇನೆ.”
ಮುಲ್ಯಾನನ್ನು ಕರೆಸಲಾಯಿತು. ಮ್ಯಾಜಿಸ್ಟ್ರೇಟ್ ಹೇಳಿದ. ನೋಡು, ಮುಲ್ಲಾ ಬಂದಿದ್ದಾರೆ. ಇಗ ನೀನು ನಕ್ಕಿದ್ದಕ್ಕೆ ಕಾರಣ ವನ್ನು ವಿವರಿಸು” ಗುರುನಾನಕ್ ಹೇಳರ `ಮುಲ್ಲಾರಿಗೆ ಕೊರಾನ್ ಗ್ರಂಥವನ್ನು